ಸೀತಾ ರಾಮ ಝೀ ಕನ್ನಡದಲ್ಲಿ ಪ್ರಸಾರವಾಗುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ː30ಕ್ಕೆ ಪ್ರಸಾರಗೊಳ್ಳುತ್ತಿದೆ. ಇದು 2023ರ ಜುಲೈ 17ಕ್ಕೆ ಪ್ರಥಮ ಪ್ರಸಾರಗೊಂಡಿತು. ಈ ಕಾರ್ಯಕ್ರಮವು ಝೀ ಮರಾಠಿ ಭಾಷೆಯ ಮಾಜಿ ತುಜಿ ರೇಶಿಮಗತ್ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮತ್ತು ರಿತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. == ಕಥಾ ಹಂದರ == ಕಥೆಯು ಸಿಂಗಲ್ ಮದರ್ ಸೀತಾ, ಅವಳ ಮಗಳು ಸಿಹಿ ಮತ್ತು ಅಗರ್ಭ ಶ್ರೀಮಂತ ರಾಮ್ ದೇಸಾಯಿ ನಡುವಿನ ಸಂಬಂಧವನ್ನು ತೋರಿಸುತ್ತದೆ. ಕಥೆಯು ಈ ಮೂವರ ಮಧ್ಯೆ ಸುತ್ತುತ್ತಾ ಇರುತ್ತದೆ. ಸಿಹಿ ಎನ್ನುವ ಪುಟ್ಟ ಮಗಳ ಜೊತೆ ಸೀತಾ ಬದುಕುತ್ತಿದ್ದಾಳೆ. ಅವಳ ಗಂಡ ಯಾರು ಎಂದು ಯಾರಿಗು ಗೊತ್ತಿಲ್ಲ. ರಾಮ್ ಆಫೀಸ್‌ನಲ್ಲಿ ಸೀತಾ ಕೆಲಸ ಮಾಡುತ್ತಿದ್ದಾಳೆ. ರಾಮ್ ತನ್ನ ಬಾಸ್ ಎನ್ನೋದು ಸೀತಾ ಸೇರಿ ಅಲ್ಲಿರುವ ಯಾರಿಗೂ ಗೊತ್ತಿಲ್ಲ. ಆಫೀಸ್‌ನಲ್ಲಿ ನಡೆಯುತ್ತಿರುವ ಮೋಸವನ್ನು ಕಂಡು ಹಿಡಿಯಲು ರಾಮ್ ತಾನೊಬ್ಬ ಸಾಮಾನ್ಯ ಉದ್ಯೋಗಿ ಎಂಬ ಪೋಷಾಕು ತೊಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಸಿಹಿಯಿಂದ ರಾಮ್ ಹಾಗು ಸ್ನೇಹಾ ಮಧ್ಯೆ ಪ್ರೀತಿ ಹುಟ್ಟತ್ತಾ ಎನ್ನುವುದೇ ಕಥೆಯಾಗಿದೆ. == ಪಾತ್ರವರ್ಗ == ಮುಖ್ಯ ಪಾತ್ರಗಳು ವೈಷ್ಣವಿ ಗೌಡ : ಸೀತಾ ಪಾತ್ರದಲ್ಲಿ, ನಾಯಕಿಯಾಗಿ. ಸಿಹಿಯ ಅಮ್ಮನಾಗಿ. ಗಗನ್ ಚಿನ್ನಪ್ಪ: ಶ್ರೀರಾಮ್ ದೇಸಾಯಿ ಪಾತ್ರದಲ್ಲಿ, ನಾಯಕನಾಗಿ. ರಿತ್ತು ಸಿಂಗ್: ಸಿಹಿಯಾಗಿ, ಸೀತಾಳ ಮಗಳಾಗಿ. ಪೋಷಕ ಪಾತ್ರಗಳು ಪೂಜಾ ಲೋಕೇಶ್: ಭಾರ್ಗವಿ ದೇಸಾಯಿ ಪಾತ್ರದಲ್ಲಿ, ಖಳನಾಯಕಿಯಾಗಿ. ಮುಖ್ಯಮಂತ್ರಿ ಚಂದ್ರು: ಸೂರ್ಯಪ್ರಕಾಶ್ ದೇಸಾಯಿ ಪಾತ್ರದಲ್ಲಿ. ರಾಮ್ ತಾತಾನಾಗಿ. ಅಶೋಕ್ ಶರ್ಮಾ: ಅಶೋಕ್ ಪಾತ್ರದಲ್ಲಿ, ರಾಮ್ ಸ್ನೇಹಿತನಾಗಿ. ಮೇಘನಾ ಶಂಕರಪ್ಪ: ಪ್ರಿಯಾ ಪಾತ್ರದಲ್ಲಿ, ಸೀತಾ ಸ್ನೇಹಿತೆಯಾಗಿ. ಜ್ಯೋತಿ ಕಿರಣ್: ರಾಮೋಲ: ಚಾಂದಿನಿ ಪಾತ್ರದಲ್ಲಿ. ರಾಮ್ ಮಾಜಿ ಪ್ರೇಯಸಿಯಾಗಿ & ಮೇಘ ಶ್ಯಾಮ್ ನಾದಿನಿಯಾಗಿ ಅನುಷಾ ಪರಮೇಶ್ವರಪ್ಪ: ಅಂಜಲಿ ಆಲಿಯಾಸ್ ಪಾಪಚ್ಚಿ ಪಾತ್ರದಲ್ಲಿ. ಅಶೋಕ್ ತಂಗಿಯಾಗಿ. ಅರ್ಜುನ ಬಿ.ಆರ್: ಡಾಕ್ಟರ್. ಮೇಘ ಶ್ಯಾಮ್ ಪಾತ್ರದಲ್ಲಿ. ರಾಮ್ ಸ್ನೇಹಿತನಾಗಿ. == ರೂಪಾಂತರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಝೀ5ನಲ್ಲಿ ಸೀತಾ ರಾಮ